ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ವಾರದ ಕೊನೆಯಲ್ಲಿ ಕಿಚ್ಚ ಸುದೀಪ್ ಅವರಿಂದ ಬರುವ ಚಪ್ಪಾಳೆಗೆ ವಿಶೇಷ ಮಹತ್ವವಿದೆ. ಆದರೆ ಈ ವಾರ ಉತ್ತಮವಾಗಿ ಆಟವಾಡಿದರೂ ಪ್ರಶಾಂತ್ ಹಾಗೂ ತಾಂಡವ್ ಅವರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿರಲಿಲ್ಲ. ಈ ಚಪ್ಪಾಳೆಗೆ ಸ್ವಂತಿಕೆ ಮತ್ತು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುವ ಸಾಮರ್ಥ್ಯವೇ ಮುಖ್ಯ ಎಂದು ಸುದೀಪ್ ಸ್ಪಷ್ಟಪಡಿಸಿದ್ದಾರೆ. ಇಡೀ ವಾರ ಉತ್ತಮವಾಗಿ ಆಟವಾಡುವ ಸ್ಪರ್ಧಿಗಳನ್ನು ಗುರುತಿಸಿ ಸುದೀಪ್ ಅವರು ಚಪ್ಪಾಳೆ ನೀಡಿ ಪ್ರಶಂಸಿಸುವುದು ವಾಡಿಕೆ. ಆದರೆ, ಈ ವಾರ ಅತ್ಯುತ್ತಮವಾಗಿ ಆಟವಾಡಿದರೂ ಪ್ರಶಾಂತ್ ಹಾಗೂ ತಾಂಡವ್ ಅವರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿರಲಿಲ್ಲ.