ಕರ್ನಾಟಕ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ನವೆಂಬರ್ 2 ರ ಇಂದಿನ ಗಾಳಿಯ ಗುಣಮಟ್ಟ ಸಾಧಾರಣ (Moderate) ಹಂತಕ್ಕೆ ಕುಸಿದಿದೆ. ದೀಪಾವಳಿ ಮತ್ತು ಚಳಿಗಾಲದ ಆರಂಭದಿಂದಾಗಿ ಸಿಲ್ಕ್ ಬೋರ್ಡ್, ಪೀಣ್ಯ ಪ್ರದೇಶಗಳಲ್ಲಿ ಮಾಲಿನ್ಯ ಹೆಚ್ಚಾಗಿದ್ದು, ಮೈಸೂರು ಹಾಗೂ ಮಡಿಕೇರಿ ನಗರಗಳಲ್ಲಿ ಶುದ್ಧ ವಾತಾವರಣ ದಾಖಲಾಗಿದೆ. ರಾಜ್ಯದ ವಿವಿಧ ನಗರಗಳ ಸಂಪೂರ್ಣ AQI ವರದಿ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ವಿವರ ಇಲ್ಲಿದೆ. ಬೆಂಗಳೂರು, ನವೆಂಬರ್ 02: ಚಳಿಗಾಲದ ಆರಂಭದ ಹಿನ್ನೆಲೆಯಲ್ಲಿ ಇಂದು ರಾಜ್ಯದಾದ್ಯಂತ ವಾಯು ಗುಣಮಟ್ಟ ಸೂಚಿ ಗಮನಾರ್ಹ ಬದಲಾವಣೆಗಳನ್ನು ಕಂಡಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ಗಾಳಿಯ ಮಾಲಿನ್ಯ ಮಟ್ಟವು ಸಾಧಾರಣದಿಂದ ಮಧ್ಯಮ ಹಂತದಲ್ಲಿದೆ.