ಬಿಗ್ ಬಾಸ್ ಕನ್ನಡ ವೀಕೆಂಡ್ ಎಪಿಸೋಡ್ನಲ್ಲಿ ನಡೆದ ಯೆಸ್ ಆರ್ ನೋ ರೌಂಡ್ ಗರಂ ವಾತಾವರಣ ಸೃಷ್ಟಿಸಿತ್ತು. ಇಬ್ಬರ ಜಗಳದಲ್ಲಿ ಲಾಭ ಪಡೆಯುವ ಮೂರನೇ ವ್ಯಕ್ತಿ ಆಸಿಯಾ ಎಂಬ ಪ್ರಶ್ನೆಗೆ ಸ್ಪರ್ಧಿಗಳು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದರು. ಗಾನವಿ ಸೋನಿಕಾ ಆರೋಪಕ್ಕೆ ಆಸಿಯಾ ನೀಡಿದ ತಿರುಗೇಟು ಇಲ್ಲಿದೆ. ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನ ವೀಕೆಂಡ್ ಎಪಿಸೋಡ್ನಲ್ಲಿ ಈ ಬಾರಿ 'ಯೆಸ್ ಆರ್ ನೋ' ರೌಂಡ್ ಸಾಕಷ್ಟು ಕುತೂಹಲ ಮೂಡಿಸಿತು. ಆರಂಭದ ದಿನಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ಆಸಿಯಾ ಅವರು ಈಗ ಡಲ್ ಆಗಿದ್ದಾರೆ. ಇದಕ್ಕೆ ಎಲ್ಲಾ ಸ್ಪರ್ಧಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.