Tamannah Bhatia - ಬಹುಭಾಷಾ ನಟಿ ತಮನ್ನಾ ಭಾಟಿಯಾ ಸೌಂದರ್ಯಕ್ಕೆ ತುಂಬ ಅಭಿಮಾನಿಗಳಿದ್ದಾರೆ. ಚಿತ್ರರಂಗದ ಮಂದಿಯೂ ಅವರ ಫ್ಯಾನ್ಗಳಾಗಿದ್ದಾರೆ. ಅಂತಹ ಒಬ್ಬ ಅಭಿಮಾನಿ ಬಾಲಿವುಡ್ ಹಿರಿಯ ನಟ ಅನ್. ಅಂತಹ ಒಬ್ಬ ಅಭಿಮಾನಿ ಬಾಲಿವುಡ್ ಹಿರಿಯ ನಟ ಅನ್ನು ಕಪೂರ್. ಕೆಲ ತಿಂಗಳ ಹಿಂದೆ ಅನ್ನು, "ಇತ್ತೀಚೆಗಷ್ಟೆ "ಆಜ್ ಕಿ ರಾತ್' ಹಾಡನ್ನು ನೋಡಿದೆ. ಆ ಸಹೋದರಿ, ತನ್ನ ಹಾಡು, ಹಾಲಿನಂತ ಮುಖ, ಮೈಮಾಟದಿಂದ ಮಕ್ಕಳನ್ನು ಮಲಗಿಸುತ್ತಾರೆ. ಪ್ರತಿ ರಾತ್ರಿ ಒಳ್ಳೆ ನಿದ್ದೆಗಿಂತ ಇನ್ನೇನು ಬೇಕು ಹೇಳಿ? ಆಕೆಗೆ ಏನೇ ಆಸೆಗಳಿದ್ದರೂ ಈಡೇರಲಿ ಎಂದು ಹಾರೈಸುತ್ತೇನೆ' ಎಂದು ತಮನ್ನಾ ಕಾಲೆಳೆದಿದ್ದರು.