Illegal MP: ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಇಂಡಿಯಾ ಒಕ್ಕೂಟದ ರ್ಯಾಲಿಯು ಸಂಪೂರ್ಣವಾಗಿ ವಿಫಲಗೊಂಡಿದೆ ಎಂದು ಆಡಳಿತರೂಢ ಭಾರತೀಯ ಜನತಾ ಪಕ್ಷ ತೀವ್ರವಾಗಿ ವಾಗ್ದಾಳಿ ನಡೆಸಿದೆ. ಸುದ್ದಿಗೋಷ. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಸದ ಸಂಬಿತ್ ಪಾತ್ರಾ, ವಿಪಕ್ಷಗಳ ರಾರಯಲಿಯು ಕೇವಲ ಫ್ಲಾಪ್ ಶೋ ಆಗಿದ್ದು, ಮೈದಾನದಲ್ಲಿ ಶೇ. 40ರಷ್ಟು ಜಾಗ ಖಾಲಿಯಾಗಿತ್ತು ಎಂದರು.2024ರ ಲೋಕಸಭಾ ಚುನಾವಣೆಯ ಫಲಿತಾಂಶಗಳು ಕಾನೂನುಬಾಹಿರ ಎಂಬ ರಾಹುಲ್ ಗಾಂಧಿ ಆರೋಪಕ್ಕೆ ಖಡಕ್ ತಿರುಗೇಟು ನೀಡಿದ ಸಂಬಿತ್ ಪಾತ್ರಾ, ಹಾಗಾದರೆ ರಾಹುಲ್ ಗಾಂಧಿ ಅವರು ಅಕ್ರಮ ಸಂಸದ, ಅಕ್ರಮ ವಿರೋಧ ಪಕ್ಷದ ನಾಯಕ ಎಂದರ್ಥವೇ ಎಂದು ಪ್ರಶ್ನಿಸಿದರು. 2024ರ ಚುನಾವಣಾ ಫಲಿತಾಂಶಗಳು ಅಕ್ರಮವಾಗಿದ್ದರೆ, ಅದನ್ನು ನ್ಯಾಯಾಲಯದಲ್ಲಿ ಏಕೆ ಪ್ರಶ್ನಿಸಲಿಲ್ಲ..?