ವಿಜಯವಾಣಿ ಸುದ್ದಿಜಾಲ ಸುಳ್ಯತಾಲೂಕಿನ ವಿವಿಧ ಕಡೆ ಪವರ್ಮನ್ಗಳ ಕೊರತೆ ವ್ಯಾಪಕವಾಗಿ ಕಾಡುತ್ತಿರುವ ಬಗ್ಗೆ ಸುಳ್ಯ ತಾಪಂ ಸಭಾಂಗಣದಲ್ಲಿ ನಡೆದ ಸುಳ್ಯ ಮತ್ತು ಸುಬ್ರಹ್ಮಣ್ಯ ಉಪವಿಭಾಗ ಮಟ್ಟದ ಮೆಸ್ಕ. ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ತಾಲೂಕಿನ ಬಹುತೇಕ ಗ್ರಾಮೀಣ ಪ್ರದೇಶಗಳಾದ ಮರ್ಕಂಜ, ಬೊಳ್ಳಾಜೆ ಮುಂತಾದ ಪ್ರದೇಶಗಳಿಗೆ ಪವರ್ಮನ್ಗಳಿಲ್ಲದೆ ಸಮಸ್ಯೆಯಾಗುತ್ತಿದೆ. ಸಮಸ್ಯೆ ಇರುವ ಕಡೆ ಮೊದಲ ಆದ್ಯತೆ ಮೇರೆಗೆ ಪವರ್ಮನ್ಗಳನ್ನು ನೀಡಬೇಕು ಎಂದು ಆಗ್ರಹಿಸಿದರು. ಗ್ಯಾರಂಟಿ ಸಮಿತಿ ಸದಸ್ಯ ಮುಸ್ತಫ ಮಾತನಾಡಿ, ಬೆಳ್ಳಾರೆ, ಐವರ್ನಾಡು, ಚೊಕ್ಕಾಡಿ ಭಾಗದಲ್ಲಿ ಪವರ್ಮನ್ಗಳ ಸಮಸ್ಯೆ ಇದೆ.