ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿವಿದ್ಯಾರ್ಥಿಗಳು ಸರಿಯಾಗಿ ಓದಿ ಜ್ಞಾನಾರ್ಜನೆ ವಾಡಿದರೆ ಬದುಕಿನಲ್ಲಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದು. ವಿದ್ಯಾರ್ಥಿಗಳು ಎಐ, ಚಾಟ್ಜಿಪಿಟಿ ಅವಲಂಬಿಸಿದರೂ ಸ್. ವಿದ್ಯಾರ್ಥಿಗಳು ಎಐ, ಚಾಟ್ಜಿಪಿಟಿ ಅವಲಂಬಿಸಿದರೂ ಸ್ವತಃ ಓದದಿದ್ದರೆ ಯಾವುದೇ ಪ್ರಯೋಜನವಿಲ್ಲ ಎಂದು ಎಸ್ಡಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುವಾರ್ ಹೇಳಿದರು. ಉಜಿರೆ ಎಸ್ಡಿಎಂ ತಾಂತ್ರಿಕ ಮಹಾವಿದ್ಯಾಲಯದ ವಾರ್ಷಿಕೋತ್ಸವ ಸ್ಟಾರ್ ಡಾಮ್-2026 ಮತ್ತು ಬಹುವಾನ ವಿತರಣಾ ಸವಾರಂಭ ಉದ್ಘಾಟಿಸಿ ವಾತನಾಡಿದರು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಅಗತ್ಯ ಸೌಲಭ್ಯಗಳನ್ನು ಸಂಸ್ಥೆ ಒದಗಿಸುತ್ತಿದೆ. ವಿದ್ಯಾರ್ಥಿಗಳು ಸಕಾರಾತ್ಮಕ ಚಿಂತನೆಯೊಂದಿಗೆ ಅವಕಾಶಗಳನ್ನು ಸದುಪಯೋಗಿಸಬೇಕು ಎಂದರು. ಬೆಂಗಳೂರಿನ ಟಿಸಿಎಸ್ ಸಂಶೋಧನೆ ಮತ್ತು ಸೈಬರ್ ಸೆಕ್ಯುರಿಟಿ ವಿಭಾಗದ ಮುಖ್ಯಸ್ಥ ಡಾ.ರಾಜನ್ ಎಂ.ಎ.