ನವದೆಹಲಿ: ತಂತ್ರಜ್ಞಾನ ಮತ್ತು ಡಿಜಿಟಲ್ ಪಾವತಿ ವ್ಯವಸ್ಥೆಗಳು ಅಪರಾಧಗಳನ್ನು ತಡೆಯಲು ಮತ್ತು ಅಪರಾಧಿಗಳನ್ನು ಸೆರೆಹಿಡಿಯಲು ಎಷ್ಟು ಸಹಕಾರಿ ಎಂಬುದಕ್ಕೆ ಈ ಘಟನೆ ಒಂದು ಅತ್ಯುತ್ತಮ ಉದಾಹರಣೆಯಾಗಿದೆ. ತ್ವರಿತವಾಗಿ ಯೋಚಿಸಿದ ದೆಹಲಿ ಪೊಲೀಸರು ಹಾಗೂ ಯುಪಿಐ ( UPI Transfer ) ವ್ಯವಸ್ಥೆಯ ‘ಡಿಜಿಟಲ್ ಸುಳಿವು’ ಬಳಸಿಕೊಂಡು, ಅಪಹರಣಕ್ಕೊಳಗಾಗಿದ್ದ 13 ವರ್ಷದ ಬಾಲಕನನ್ನು ಕೇವಲ ಮೂರೇ ಮೂರು ಗಂಟೆಗಳಲ್ಲಿ ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಇಡೀ ಕಾರ್ಯಾಚರಣೆಯು ದೆಹಲಿ ಕರಾವಾಳ್ ನಗರದ ಕಿರಿದಾದ ಸಂದಿಯೊಂದರಲ್ಲಿ ನಡೆದಿದ್ದು, ಸೈಬರ್ ಕೆಫೆಯ ಮಾಲೀಕನ ಸಹಕಾರ ಹಾಗೂ ಪೊಲೀಸರ ಜಾಣ ನಡೆಯಿಂದ ಅಪಹರಣಕಾರನನ್ನು ಸ್ಥಳದಲ್ಲೇ ಹೆಡೆಮುರಿಕಟ್ಟಲಾಗಿದೆ.ಈ ರೋಚಕ ಘಟನೆಯು ಅಕ್ಟೋಬರ್ 30 ರಂದು ಶುರುವಾಯಿತು.