ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಪಂಚಾಯಿತಿ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಭವನದಲ್ಲಿ ಶನಿವಾರ ನಡೆಯಿತು. ಕ. ಕಿನ್ನಿಗೋಳಿ ಪಂಚಾಯಿತಿ ವ್ಯಾಪ್ತಿಯ ಘನತ್ಯಾಜ್ಯ ಘಟಕದ ಕುರಿತು ಸಭೆಯಲ್ಲಿ ಪರ-ವಿರೋಧವಾಗಿ ತೀವ್ರ ಚರ್ಚೆ ನಡೆಯಿತು. ಕಿನ್ನಿಗೋಳಿ ಪಂಚಾಯಿತಿ ವ್ಯಾಪ್ತಿಯ ಘನತ್ಯಾಜ್ಯ ಘಟಕಕ್ಕೆ ಸಮೀಪದ ನಿವಾಸಿಗಳಿಂದ ವಿರೋಧವಿದೆ. ಯೋಜನೆಯಲ್ಲಿ ಸಮಸ್ಯೆ ಇದ್ದರೆ ಪ್ರಾರಂಭಿಸುವುದಿಲ್ಲ, ಆದರೆ ಕಳೆದ ಬಾರಿ ಪ್ರಾರಂಭವಾದ ಎಫ್.ಎಸ್.ಟಿ ಘಟಕಕ್ಕೆ ಯಾರ ವಿರೋಧವೂ ಇರಲಿಲ್ಲ. ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಇದುವರೆಗೆ ವಿರೋಧ ವ್ಯಕ್ತಪಡಿಸದ ಸದಸ್ಯರು ಈಗ ಪ್ರತಿಭಟಿಸುವುದು ಸರಿಯಲ್ಲ, ಇದಕ್ಕೆ ಸ್ಪಷ್ಟನೆ ನೀಡಬೇಕು. ಕಾಂಗ್ರೆಸ್ ನಾಯಕ ಮಿಥುನ್ ರೈ ಭೇಟಿ ನೀಡಿದಾಗ ಪಂಚಾಯಿತಿ ಮುಖ್ಯಾಧಿಕಾರಿ ಸ್ಥಳದಲ್ಲಿದ್ದರು.