ವಿಜಯವಾಣಿ ಸುದ್ದಿಜಾಲ ಉಳ್ಳಾಲಸೋಮೇಶ್ವರ ಪುರಸಭೆಯ ಸಾಮಾನ್ಯ ಸಭೆ ಶನಿವಾರ ನಡೆದಿದ್ದು, ಖಾಸಗಿ ಕಟ್ಟಡಗಳಿಂದ ಸಾರ್ವಜನಿಕ ಸ್ಥಳಕ್ಕೆ ಶೌಚನೀರು ಹರಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸದ. ಆಗ ಮುಖ್ಯಾಧಿಕಾರಿ ವಿವಿಧ ಕಾರಣಗಳನ್ನು ಮುಂದಿಟ್ಟಿದ್ದು ಸದಸ್ಯರ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಖಾಸಗಿ ಶಿಕ್ಷಣ ಸಂಸ್ಥೆಯ ಕಲುಷಿತ ನೀರು ಕಳೆದೆರಡು ವರ್ಷಗಳಿಂದ ಸಾರ್ವಜನಿಕ ಸ್ಥಳದಲ್ಲಿ ಹರಿದು ಗಂಭೀರ ಸಮಸ್ಯೆ ಸೃಷ್ಟಿಸುತ್ತಿದ್ದು, ದೂರು ನೀಡಿದರೆ ಕುಂಟು ನೆಪ ಹೇಳುತ್ತಿದ್ದಾರೆಂದು ಸಪ್ನಾ ಶೆಟ್ಟಿ ದೂರಿದರು. ಪುರಸಭಾ ವ್ಯಾಪ್ತಿಯಲ್ಲಿರುವ ಮೂರ್ನಾಲ್ಕು ಬಹುಮಹಡಿ ಕಟ್ಟಡಗಳಿಂದಲೂ ನೀರು ಸಾರ್ವಜನಿಕ ಸ್ಥಳಕ್ಕೆ ಬಿಡಲಾಗುತ್ತಿದೆ, ಕಟ್ಟಡ ನಿರ್ಮಾಣ ಸಂದರ್ಭ ನಮ್ಮ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರಾ ಎಂದು ಹರೀಶ್ ಕುಂಪಲ ಪ್ರಶ್ನಿಸಿದರು.