ಬಿಗ್ ಬಾಸ್ ಮಲಯಾಳಂ 8ರ ಇತಿಹಾಸದಲ್ಲೇ ಮೊದಲ ಬಾರಿಗೆ, ಸ್ಪರ್ಧಿಯೊಬ್ಬರ ಪೋಷಕರು ಫ್ಯಾಮಿಲಿ ವೀಕ್ ಸಮಯದಲ್ಲಿ ಅಲ್ಲದೆ, ವೀಕೆಂಡ್ ಸಂಚಿಕೆಯಲ್ಲಿ ನೇರವಾಗಿ ಶೋ ಒಳಗೆ ಪ್ರವೇಶಿಸಿದ್ದಾರೆ. ಅಲ್ಲದೆ ತಮ್ಮ ಮಗಳನ್ನು ವಾಪಸ್ ಮನೆಗೆ ಕರೆದೊಯ್ಯುವ ವಿನಂತಿ ಮಾಡಿದ್ದಾರೆ. ನಿರೂಪಕ ಮೋಹನ್ಲಾಲ್ ಅವರು ಸ್ಪರ್ಧಿ ನೇಹಾ ಫಾತಿಮಾ ಅವರ ಪೋಷಕರನ್ನು ವೇದಿಕೆಗೆ ಸ್ವಾಗತಿಸಿದ್ದಾರೆ. ವೀಡಿಯೊದಲ್ಲಿ ಕಣ್ಣೀರು ಹಾಕುತ್ತಿರುವ ನೇಹಾ ಅವರ ಪೋಷಕರು, ನೇಹಾ ಮನೆಯೊಳಗೆ ಏನು ಮಾಡುತ್ತಿದ್ದಾಳೆ? ಎಂದು ಮೋಹನ್ಲಾಲ್ ಅವರನ್ನು ಪ್ರಶ್ನಿಸಿದ್ದಾರೆ.