ಟಿ20 ನಾಯಕ ಶ್ರೇಯಸ್ ಅಯ್ಯರ್ ಮಾಜಿ ನಾಯಕ ಎಮ್ ಎಸ್ ಧೋನಿ ಅವರ ದಾಖಲೆ ಮುರಿದು ಅಗ್ರಸ್ಥಾನಕ್ಕೆ ತಲುಪಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ನಡೆದಿದ್ದ ಮೂರನೇ ಟಿ20ಯಲ್ಲಿ ಭಾರತ ತಂಡ 14 ರನ್ಗಳಿಂದ ಗೆಲುವು ಸಾಧಿಸಿದ್ದು ತಿಳಿದಿರುವ ವಿಷಯ. ಆದಾಗ್ಯೂ ಈ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ದಾಖಲೆಯೊಂದನ್ನು ಬರೆದಿದ್ದು ಅವರು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಹಿಂದಿಕ್ಕಿದ್ದಾರೆ.ವಾಸ್ತವವಾಗಿ, ಅಯ್ಯರ್ ನಾಯಕತ್ವದಲ್ಲಿ ತಂಡಗಳು 200ಕ್ಕೂ ಹೆಚ್ಚು ರನ್ ಗಳಿಸಿದ್ದು ಇದು 37ನೇ ಬಾರಿಯಾಗಿದೆ. ಇದರೊಂದಿಗೆ, ಶ್ರೇಯಸ್ ಅಯ್ಯರ್ ಮಾಜಿ ಭಾರತೀಯ ನಾಯಕ ಎಂ.ಎಸ್. ಧೋನಿ ಅವರ ದಾಖಲೆಯನ್ನು (36 ಬಾರಿ) ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ.