‘ಆರ್ಆರ್ಆರ್’ ಬಳಿಕ ರಾಮ್ ಚರಣ್ಗೆ ಸ್ಪಷ್ಟ ಹಿಟ್ ಸಿಕ್ಕೇ ಇಲ್ಲ. ಇದೀಗ ರಾಮ್ ಚರಣ್ ನಟನೆಯ ಹೊಸ ಸಿನಿಮಾ ಸೆಟ್ಟೇರಿದೆ. ಈ ಹಿಂದೆ ರಾಮ್ ಚರಣ್ಗೆ ‘ರಂಗಸ್ಥಲಂ’ ಮೂಲಕ ಭಾರಿ ದೊಡ್ಡ ಹಿಟ್ ಕೊಟ್ಟ ಸುಕುಮಾರ್ ಅವರು ಇದೀಗ ಎರಡನೇ ಬಾರಿ ರಾಮ್ ಅವರಿಗೆ ಸಿನಿಮಾ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಸಿನಿಮಾದ ಪೋಸ್ಟರ್ ಒಂದು ರಿಲೀಸ್ ಆಗಿದ್ದು, ಕುತೂಹಲ ಕೆರಳಿಸುವಂತಿದೆ ಪೋಸ್ಟರ್. ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಇದೇ ವರ್ಷ ಬಿಡುಗಡೆ ಆಗಿ ಮಿಶ್ರ ಪ್ರತಿಕ್ರಿಯೆ ಪಡೆಯಿತು. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹಣ ಗಳಿಸಿತಾದರೂ ಸಿನಿಮಾ ದೊಡ್ಡ ಹಿಟ್ ಏನೂ ಆಗಲಿಲ್ಲ. ಇಂದು ಹೈದರಾಬಾದ್ನಲ್ಲಿ ಸಿನಿಮಾದ ಮುಹೂರ್ತ ಕಾರ್ಯಕ್ರಮ ನಡೆಯಿತು.