Gold Price Today: Gold Prices See Sharp Drop, Hit 10-Month Low; Silver Rates Also Decline. ಚಿನ್ನದ ಬೆಲೆಯು ನವೆಂಬರ್ 1ರಂದು ಭರ್ಜರಿ ಇಳಿಕೆಯಾಗಿದೆ. ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯು ಏರಿಕೆಯಾಗಿತ್ತು. ಇದೀಗ ಕಳೆದ ನಾಲ್ಕು ದಿನಗಳಿಂದ ಚಿನ್ನದ ಬೆಲೆಯು ನಿರಂತರವಾಗಿ ಇಳಿಕೆಯಾಗಿದೆ. ಕಳೆದ 10 ತಿಂಗಳಲ್ಲಿಯೇ ಚಿನ್ನದ ಬೆಲೆ ಕನಿಷ್ಠಕ್ಕೆ ಇಳಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಮಾರಾಟದ ಬೆಲೆಯಲ್ಲಿ ಭಾರೀ ವ್ಯತ್ಯಾಸವಾಗಿದೆ. ಬೆಳ್ಳಿ ಬೆಲೆಯು ಸಹ ವರ್ಷದ ಪ್ರಾರಂಭಕ್ಕೆ ಹೋಲಿಕೆ ಮಾಡಿದರೆ ಅರ್ಧಕ್ಕೆ ಅರ್ಧದಷ್ಟು ಇಳಿಕೆಯಾಗಿದೆ.ದೀಪಾವಳಿ ಸಂದರ್ಭದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಹೆಚ್ಚಳವಾಗಬಹುದು ಎಂದು ಅಂದಾಜಿಸಲಾಗಿತ್ತು.