ಬಿಗ್ ಬಾಸ್ ಸ್ವಯಂವರ ಟಾಸ್ಕ್ ವೇಳೆ ಕ್ಯಾಪ್ಟನ್ ಸೌಂದರ್ಯಾ ಶೆಟ್ಟಿ ಅವರು ಯಶಸ್ ಅವರನ್ನು ಆಯ್ಕೆ ಮಾಡಿದ್ದು ಬಯಾಸ್ಡ್ ಎಂಬ ಆರೋಪ ಕೇಳಿಬಂದಿತ್ತು. ಆದರೆ ವೀಕೆಂಡ್ ಪಂಚಾಯಿತಿಯಲ್ಲಿ ವಿಡಿಯೋ ತುಣುಕುಗಳನ್ನು ತೋರಿಸಿ ಗಗನ್ ತಂಡದ ಸೋಲಿನ ಮನಸ್ಥಿತಿಯನ್ನು ವಿವರಿಸಿದ ಕಿಚ್ಚ ಸುದೀಪ್ ಸೌಂದರ್ಯಾ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಬಿಗ್ ಬಾಸ್ ಕನ್ನಡದ ಈ ವಾರದ ಆಟದಲ್ಲಿ ಕ್ಯಾಪ್ಟನ್ ಸೌಂದರ್ಯಾ ಶೆಟ್ಟಿ ವಿರುದ್ಧ 'ಬಯಾಸ್ಡ್' (ಪಕ್ಷಪಾತ) ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ವಾರದ ಪ್ರಮುಖ ಆಟವಾಗಿದ್ದ 'ಸ್ವಯಂವರ' ಟಾಸ್ಕ್ನಲ್ಲಿ ಯಶಸ್ ಹಾಗೂ ಗಗನ್ ಎರಡು ಪ್ರತ್ಯೇಕ ತಂಡಗಳಾಗಿದ್ದರು. ಈ ಇಬ್ಬರ ಪೈಕಿ ಯಾರಾದರೂ ಒಬ್ಬರನ್ನು ವಿಜೇತರೆಂದು ಸೌಂದರ್ಯಾ ಆಯ್ಕೆ ಮಾಡಬೇಕಿತ್ತು.