ಕರ್ನಾಟಕ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ನವೆಂಬರ್ 1ರ ಇಂದಿನ ಗಾಳಿಯ ಗುಣಮಟ್ಟ ಸಾಧಾರಣ ಮಟ್ಟಕ್ಕೆ ಕುಸಿದಿದೆ. ದೀಪಾವಳಿ ಹಬ್ಬ ಮತ್ತು ಚಳಿಗಾಲದ ಆರಂಭದಿಂದಾಗಿ ಸಿಲ್ಕ್ ಬೋರ್ಡ್, ಪೀಣ್ಯ ಪ್ರದೇಶಗಳಲ್ಲಿ ಮಾಲಿನ್ಯ ಹೆಚ್ಚಾಗಿದ್ದು, ಮೈಸೂರು ಹಾಗೂ ಮಡಿಕೇರಿಯಲ್ಲಿ ಶುದ್ಧ ವಾತಾವರಣ ದಾಖಲಾಗಿದೆ. ರಾಜ್ಯದ ವಿವಿಧ ನಗರಗಳ ಸಂಪೂರ್ಣ AQI ವರದಿ ಇಲ್ಲಿದೆ. ಬೆಂಗಳೂರು, ನವೆಂಬರ್ 01: ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ನವೆಂಬರ್ 1ರ ಇಂದು ಗಾಳಿಯ ಗುಣಮಟ್ಟ ಬದಲಾಗುತ್ತಿದ್ದು, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಗಮನ ಸೆಳೆಯುತ್ತಿದೆ. ದೀಪಾವಳಿ ಹಬ್ಬದ ನಂತರದ ವಾತಾವರಣ, ವಾಹನಗಳ ದಟ್ಟಣೆ ಹಾಗೂ ಚಳಿಗಾಲದ ಆರಂಭದಿಂದಾಗಿ ಸಿಲಿಕಾನ್ ಸಿಟಿಯಲ್ಲಿ ವಾಯು ಮಾಲಿನ್ಯದ ಪ್ರಮಾಣ ಕೊಂಚ ಹೆಚ್ಚಾಗಿದೆ.