ಕೇಪ್ಟೌನ್: ಸ್ಪಿನ್ನರ್ ಸೈಮನ್ ಹಾರ್ಮರ್ (16ಕ್ಕೆ 6) ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಆತಿಥೇಯ ಹಾಗೂ ವಿಶ್ವ ಚಾಂಪಿಯನ್ ದಕ್ಷಿಣ ಆಫ್ರಿಕಾ ತಂಡ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ. ಇದರೊಂದಿಗೆ ಟೆಂಬಾ ಬವುಮಾ ಪಡೆ 3 ಪಂದ್ಯಗಳ ಸರಣಿಯನ್ನು 2-1ರಿಂದ ವಶಪಡಿಸಿಕೊಂಡಿದೆ. ನ್ಯೂಲ್ಯಾಂಡ್ಸ್ ಮೈದಾನದಲ್ಲಿ ಶನಿವಾರ ಮುಕ್ತಾಯಗೊಂಡ ಪಂದ್ಯದಲ್ಲಿ ಕೊನೇ ದಿನ 288 ರನ್ ಸವಾಲು ಬೆನ್ನಟ್ಟಲು ಆರಂಭಿಸಿದ ಆಸೀಸ್, ಭೋಜನ ವಿರಾಮದ ಬಳಿಕ 57.1 ಓವರ್ಗಳಲ್ಲಿ 111 ರನ್ಗಳಿಗೆ ಆಲೌಟ್ ಆಯಿತು. ತವರಿನ ಸರಣಿಯ ಮೊದಲ ಟೆಸ್ಟ್ ಸೋತಿದ್ದ ದಕ್ಷಿಣ ಆಫ್ರಿಕಾ ನಂತರದ 2 ಟೆಸ್ಟ್ಗಳಲ್ಲೂ ಗೆದ್ದು ದಿಟ್ಟ ತಿರುಗೇಟು ನೀಡಿತು.