ಕಾರವಾರ: ಜೆಎಸ್ಡಬ್ಲು ಕಂಪನಿಯ ಸಿಎಸ್ಆರ್ ನಿಽಯಿಂದ ಅಂಕೋಲಾದಲ್ಲಿ ರಿಂಗ್ ರಸ್ತೆ ತಯಾರಿಸುವುದಕ್ಕೆ ನಮ್ಮ ವಿರೋಧವಿದೆ ಎಂದು ಕೇಣಿ ವಾಣಿಜ್ಯ ಬಂದರು ವಿರೋಧಿ ಹೋರಾಟ ಸಮಿತಿಯ ಸಂಜೀವ ಬಲೆಗಾರ ತಿಳಿ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಲ್ಲೂರಿನಿಂದ ಪ್ರಾರಂಭಿಸಿ ಬೊಗ್ರಿಬೈಲ್, ಬಾಳೆಗುಳಿ, ಕೃಷ್ಣಾಪುರ, ವಂದಿಗೆ ಶೆಟಗೇರಿ, ಸುರ್ವೆ ಕೊಗ್ರೆ, ಬಾಸಗೋಡು, ಬೆಳಂಬಾರ, ಬಾವಿಕೇರಿವರೆಗೆ 30 ಮೀಟರ್ ಅಗಲದ ರಿಂಗ್ ರಸ್ತೆಯನ್ನು ಪ್ರಸ್ತಾವಿಸಲಾಗಿದೆ. ಜೆಎಸ್ಡಬ್ಲು ಕಂಪನಿಯ ಸಿಎಸ್ಆರ್ ನಿಧಿಯಲ್ಲಿ ಈ ರಸ್ತೆ ಮಾಡುವುದಾಗಿ ಘೋಷಿಸಲಾಗಿದೆ. ನಾವು ಕೇಣಿಯಲ್ಲಿ ಜೆಎಸ್ಡಬ್ಲು ಕಂಪನಿಯ ಖಾಸಗಿ ಬಂದರು ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ರಸ್ತೆ ನಿರ್ಮಾಣಕ್ಕೂ ಆಕ್ಷೇಪಣೆ ಸಲ್ಲಿಸಿದ್ದೇವೆ ಎಂದರು.