ದೇಶಾದ್ಯಂತ ನಡೆಯುತ್ತಿರುವ ಗೋ ಸಮ್ಮಾನ ಆಹ್ವಾನ ಅಭಿಯಾನ ಅಂಗವಾಗಿ ರಾಜ್ಯದಲ್ಲಿ 3 ಕೋಟಿ ಸಹಿ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ಅಭಿಯಾನದ ಮುಖ್ಯಸ್ಥ ನಂದಬಾಬಾ ಶ್ರೀ ರವೀಂದ್ರಾನಂದ ಸರಸ್ವತಿ ಸ. ಆರೂಢ ಭಾರತೀ ಸ್ವಾಮೀಜಿ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಯಿಯ ಹಾಲಿನ ನಂತರ ಜೀವಮಾನ ಪರ್ಯಂತ ಹಸುವಿನ ಹಾಲನ್ನು ಕುಡಿಯುತ್ತೇವೆ. ಬದುಕಿನ ಶುದ್ಧ ಆಹಾರದ ಸಾವಯವ ಕೃಷಿಗೆ ಹಸು ಜೀವಾಳ. ಭೂಮಿಯ ಫಲವತ್ತತೆ ಹೆಚ್ಚುವುದು ಗೋ ಗಂಜಲ, ಗೋ ಗೊಬ್ಬರದಿಂದ. ಎಲ್ಲ ಜೀವರಾಶಿಗಳಿಗೆ ಪೃಥ್ವಿ ಆಧಾರವಾದರೆ ಪೃಥ್ವಿಗೆ ಗೋವು ಆಧಾರ. ದೇಶ ಭಾಷೆ ಧರ್ಮಗಳ ಎಲ್ಲೆ ಮೀರಿ ಎಲ್ಲರಿಗೂ ಮಾನ್ಯ ಗೋವು.