ಹಣ ಸಂಪಾದಿಸುವುದು ಎಷ್ಟು ಮುಖ್ಯವೋ, ಅದನ್ನು ಉಳಿಸುವುದು ಕೂಡ ಅಷ್ಟೇ ಮುಖ್ಯ. ಅನೇಕ ಜನರು ಚೆನ್ನಾಗಿ ಸಂಪಾದಿಸುತ್ತಾರೆ, ಆದರೆ ಅವರ ಕೈಯಲ್ಲಿ ದುಡ್ಡು ನಿಲ್ಲೋದೇ ಇಲ್ಲ. ಇದೇ ರೀತಿ ಎಷ್ಟೇ ದುಡ್ಡಿದ್ದರೂ ನಿಮ್ಮ ಕೈಯಲ್ಲೂ ಹಣ ಅನ್ನೋದು ನಿಲ್ತಿಲ್ವಾ? ಹಾಗಿದ್ರೆ ತಕ್ಷಣವೇ ಈ ಕೆಲವು ಅಭ್ಯಾಸಗಳನ್ನು ಬದಲಾಯಿಸಿಕೊಳ್ಳಿ. ಇವತ್ತಿನ ಕಾಲದಲ್ಲಿ ಹಣ (money) ಸಂಪಾದನೆಗೆ ಎಷ್ಟೇ ದಾರಿಯಿದ್ದರೂ, ಸಂಪಾದಿಸಿದ ಹಣವನ್ನು ಉಳಿಸುವುದು ದೊಡ್ಡ ಸವಾಲಾಗಿದೆ. ಎಷ್ಟೇ ಸಂಪಾದನೆ ಮಾಡಿದರೂ ಸಹ ಕೈಯಲ್ಲಿ ಹಣ ಅನ್ನೋದು ನಿಲ್ಲೋದೇ ಇಲ್ಲ. ಹೌದು ಬಹುತೇಕರು ಈ ಒಂದು ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ, ಕೈ ತುಂಬಾ ಸಂಪಾದನೆ ಮಾಡಿದರೂ ತಿಂಗಳ ಕೊನೆಯಲ್ಲಿ ಅವರ ಬಳಿ ಹಣವೇ ಇರೋದಿಲ್ಲ.