ಬರ ಪರಿಹಾರ ಮಾರ್ಗಸೂಚಿಗಳ ಕುರಿತು ವಿಪಕ್ಷಗಳ ಟೀಕೆಗೆ ಡಿಸಿಎಂ ಪರಮೇಶ್ವರ್ ತಿರುಗೇಟು ನೀಡಿದ್ದಾರೆ. ರೈತರಿಗೆ ನ್ಯಾಯಯುತ, ತ್ವರಿತ ಮತ್ತು ಪಾರದರ್ಶಕ ನೆರವು ನೀಡುವುದು ಸರ್ಕಾರದ ಜವಾಬ್ದಾರಿ. ಕೇಂದ್ರದಿಂದ ತುರ್ತಾಗಿ ಅನುದಾನ ಬಿಡುಗಡೆಗೆ ಒತ್ತಾಯಿಸಿದ ಅವರು, ಮಧ್ಯಂತರ ಪರಿಹಾರ ಸೋಮವಾರದಿಂದ ವಿತರಿಸಲಾಗುವುದು ಎಂದು ಹೇಳಿದ್ದಾರೆ. ಬೆಂಗಳೂರು, ಅಕ್ಟೋಬರ್ 31: ರಾಜ್ಯ ಸರ್ಕಾರ ಇತ್ತೀಚೆಗೆ ರೈತರಿಗೆ 2500 ರೂ. ಸದ್ಯ ರೈತರಿಗೆ ಸರ್ಕಾರದ ಈ ಮಾರ್ಗಸೂಚಿಗಳ ಬಗ್ಗೆ ಟೀಕೆಗಳು ಕೇಳಿಬಂದಿವೆ. ಹೀಗಾಗಿ ವಿಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಾ.ಜಿ.ಪರಮೇಶ್ವರ್, ‘ರೈತರಿಗೆ ಬೇಕಿರುವುದು ನ್ಯಾಯಯುತ ಪರಿಹಾರವೇ ಹೊರತು, ದಾರಿ ತಪ್ಪಿಸುವ ಮಾತುಗಳಲ್ಲ’ ಎಂದು ತಿರುಗೇಟು ನೀಡಿದ್ದಾರೆ.