ಗುಜರಾತ್ನ ಏಕತಾ ನಗರದ ಪರೇಡ್ ಮೈದಾನದಲ್ಲಿ ಇಂದು ನಡೆದ ರಾಷ್ಟ್ರೀಯ ಏಕತಾ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರು ವಿರೋಧ ಪಕ್ಷದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು. ಪ್ರಜಾಪ್ರಭುತ್ವದಲ್ಲಿ, ಸರ್ಕಾರದ ನೀತಿಗಳನ್ನು ವಿರೋಧಿಸುವುದು ವಿರೋಧ ಪಕ್ಷದ ಜವಾಬ್ದಾರಿಯಾಗಿದೆ. ಆದರೆ, ವಿರೋಧ ಪಕ್ಷವು ತನ್ನ ಕರ್ತವ್ಯವನ್ನು ಬಿಟ್ಟು ಎಲ್ಲದಕ್ಕೂ ದಿಗ್ಬಂಧನ ಹಾಕುತ್ತಿರುವುದು ನಮ್ಮ ದುರಾದೃಷ್ಟ ಎಂದು ಮೋದಿ ಅಸಮಾಧಾನ ಹೊರಹಾಕಿದ್ದಾರೆ. ಭಾರತದ ಯಾವುದೇ ಜಿಲ್ಲೆಯೂ ಈಗ ನಕ್ಸಲ್ ಪೀಡಿತವಾಗಿ ಉಳಿದಿಲ್ಲ. ನಕ್ಸಲಿಸಂನ ಬೆನ್ನೆಲುಬು ಮುರಿದಿದೆ ಎಂದ ಪ್ರಧಾನಿ ಮೋದಿ ವೈಚಾರಿಕ ನಕ್ಸಲಿಸಂ ಬಗ್ಗೆ ಜನರು ಎಚ್ಚರಿಕೆಯಿಂರಿಬೇಕು ಎಂದು ಕರೆನೀಡಿದ್ದಾರೆ.