ಬಿಗ್ ಬಾಸ್ ಮನೆಯ ಗ್ರೋಸರಿ ಟಾಸ್ಕ್ ವೇಳೆ ಗಗನ್ಗೆ ಸೌಂದರ್ಯಾ 'ಮೋಸಗಾರ' ಎಂದಾಗ ಸುಮ್ಮನಿದ್ದದ್ದನ್ನು ಕಿಚ್ಚ ಸುದೀಪ್ ತೀವ್ರವಾಗಿ ಪ್ರಶ್ನಿಸಿದ್ದಾರೆ. ಸೆಲ್ಫ್ ರೆಸ್ಪೆಕ್ಟ್ ಬಗ್ಗೆ ದೊಡ್ಡದಾಗಿ ಮಾತನಾಡುವ ಗಗನ್ ಊಟಕ್ಕಾಗಿ ಇಷ್ಟೊಂದು ಕೆಳಹಂತಕ್ಕೆ ಇಳಿಯುವುದು ಸರಿಯಲ್ಲ ಎಂದು ಕಟುವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ‘ಬಿಗ್ ಬಾಸ್’ ವೀಕೆಂಡ್ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳ ಆಟದ ಶೈಲಿಯನ್ನು ಕಟುವಾಗಿ ಪ್ರಶ್ನಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಗಗನ್ ಅವರ ದ್ವಂದ್ವ ನಿಲುವನ್ನು ಪ್ರಸ್ತಾಪಿಸಿರುವುದು ಮನೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಾರದ ಪಂಚಾಯ್ತಿಯಲ್ಲಿ ಸುದೀಪ್ ಅವರು ಗಗನ್ ಅವರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಾರದ ಗ್ರೋಸರಿ ಟಾಸ್ಕ್ನಲ್ಲಿ ಸ್ಪರ್ಧಿಗಳಿಗಾಗಿ ಕೆಲವು ನಿರ್ದಿಷ್ಟ ಹ್ಯಾಶ್ಟ್ಯಾಗ್ಗಳನ್ನು ನೀಡಲಾಗಿತ್ತು.