ಪಂಜಾಬ್ (ಜೂ.15 ) ಪಂಜಾಬ್ ವಿಧಾನಸಭೆ ಚುನಾವಣೆಗೆ ತಯಾರಿಗಳು ನಡೆಯುತ್ತಿದೆ. ಕೆಲ ತಿಂಗಳು ಇರುವಾಗಲೇ ಪಂಜಾಬ್ನಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಗುರು ದ್ರೋಹಿ, ಖಾಲ್ಸಾ ಪಂತದ ವಿರೋಧಿ ಎಂದು ಸಿಖ್ ಸರ್ವಶ್ರೇಷ್ಠ ಧಾರ್ಮಿಕ ಪೀಠ ಅಖಾಲ್ ತಕ್ತ್ ಘೋಷಿಸಿದೆ. ಈ ಘೋಷಣೆ ಹೊರಬೀಳುತ್ತಿದ್ದಂತೆ ಭಗವಂತ್ ಮಾನ್ ವಿರುದ್ದ ಪ್ರತಿಭಟನೆಗಳು, ಹೋರಾಟಗಳು ಆರಂಭಗೊಂಡಿದೆ. ಭಗವಂತ್ ಮಾನ್ ಜೊತೆ ಯಾವುದೇ ಸಂಬಂಧ ಬೇಡ ಭಗವಂತ್ ಮಾನ್ ಪಂಜಾಬ್ ಮುಖ್ಯಮಂತ್ರಿಯಾಗಿ ನಡೆದುಕೊಳ್ಳುತ್ತಿರುವ ರೀತಿ ತೀವ್ರ ನೋವುಂಟು ಮಾಡಿದೆ. ಭಗವಂತ್ ಮಾನ್ ಜೊತೆ ಖಾಲ್ಸಾ ಸಮುದಾಯ ಯಾವುದೇ ಸಂಬಂಧ ಇಟ್ಟುಕೊಳ್ಳುವುದು ಬೇಡ. ಪಂಜಾಬ್ ಮುಖ್ಯಮಂತ್ರಿಯಾಗಿರಬಹುದು.