ಮಧುರೈ: ತಂಜಾವೂರು ಜಿಲ್ಲೆಯ ಕಂಡಿಯೂರಿನ ಅರುಲ್ಮಿಗು ಬ್ರಹ್ಮಶಿರಕಂಡೀಶ್ವರರ್ ದೇವಸ್ಥಾನದ ಬಳಿಯಿರುವ 'ಪೆರಿಯಾರ್' ಇ.ವಿ. ರಾಮಸಾಮಿ ಅವರ ಪ್ರತಿಮೆಯನ್ನು ನಾಲ್ಕು ವಾರಗಳ ಒಳಗೆ ತೆಗೆದುಹಾಕುವಂತೆ ಮದ. 30) ತಂಜಾವೂರು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದೆ.ದೇವಾಲಯದ ಬಳಿಯ ಪೆರಿಯಾರ್ ಪ್ರತಿಮೆ ತೆಗೆಯುವಂತೆ ರಾಮ ರವಿಕುಮಾರ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಪಿ ವೇಲ್ಮುರುಗನ್ ಮತ್ತು ಕೆ ಕೆ ರಾಮಕೃಷ್ಣನ್ ಅವರ ವಿಭಾಗೀಯ ಪೀಠವು, ಈ ಆದೇಶ ನೀಡಿದೆ. ರಾಮ ರವಿಕುಮಾರ್ ಸಲ್ಲಿಸಿದ್ದ ಅರ್ಜಿಯಲ್ಲಿ, ದೇವಾಲಯದ ಮುಂದೆ 'ಪೆರಿಯಾರ್' ಇ.ವಿ. ರಾಮಸಾಮಿ ಅವರ ಪ್ರತಿಮೆಯನ್ನು ದ್ರಾವಿಡರ್ ಕಳಗಂ (ಡಿಕೆ) ಸ್ಥಾಪಿಸಿದೆ.