ಸಾಗರ: ಪಟ್ಟಣದ ನೆಹರು ಮೈದಾನವನ್ನು ಲಾಭದ ಉದ್ದೇಶಕ್ಕಾಗಿ ನಗರಸಭೆಯಿಂದ ಕೊಡುವ ಪ್ರಶ್ನೆಯೇ ಇಲ್ಲ. ಕೃಷಿ ಮೇಳದ ಹೆಸರಿನಲ್ಲಿ ಖಾಸಗಿಯವರು ಅಮ್ಯೂಸ್ಮೆಂಟ್ ಪಾರ್ಕ್ ಹಾಕಲು ಮುಂದಾಗಿದ್ದರು. ಎಷ್ಟು ಪ. ಎಷ್ಟು ಪ್ರಭಾವ ಬೀರಿದರೂ ಅದಕ್ಕೆ ನಾನು ಅವಕಾಶ ಕೊಡಲಿಲ್ಲ ಎಂದು ಪೌರಾಯುಕ್ತ ಎಚ್.ಕೆ.ನಾಗಪ್ಪ ಹೇಳಿದರು.ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ನಗರದ ನೆಹರು ಮೈದಾನದಲ್ಲಿ ಶುಕ್ರವಾರ ಸ್ವಚ್ಛತಾ ಕಾರ್ಯ ಪರಿಶೀಲಿಸಿ, ಅಮ್ಯೂಸ್ಮೆಂಟ್ಗೆ ಬಂದ ವಸ್ತುಗಳನ್ನು ತಕ್ಷಣ ತೆರವುಗೊಳಿಸುವಂತೆ ಸೂಚಿಸಿದರು.ಸಾಗರದಲ್ಲಿ ಮಾರಿಕಾಂಬೆ ಮತ್ತು ಗಣಪತಿ ಜಾತ್ರೆ ಹೊರತುಪಡಿಸಿ ಇತರೆ ಸಂದರ್ಭಗಳಲ್ಲಿ ಮೈದಾನವನ್ನು ವಾಣಿಜ್ಯ ಉದ್ದೇಶಗಳಿಗೆ ಕೊಡುವ ಪ್ರಶ್ನೆಯೇ ಇಲ್ಲ. ಖಾಸಗಿಯವರು ಸಹ ಯಾವ ಉದ್ದೇಶಕ್ಕೆ ಬಾಡಿಗೆ ಪಡೆದಿರುತ್ತಾರೋ ಅದೇ ಉದ್ದೇಶಕ್ಕೆ ಬಳಸಬೇಕು.