ಚೆನ್ನೈ: ತಮಿಳುನಾಡಿನ ಥೇಣಿ ಜಿಲ್ಲಾ ಕಾರಾಗೃಹದಿಂದ 17 ಕೈದಿಗಳು ಪರಾರಿಯಾಗಿರುವ ಘಟನೆಗೆ ಸಿಡಿದೆದ್ದ ಸಿಎಂ ವಿಜಯ್ ನೇತೃತ್ವದ ಸರ್ಕಾರ ಇದೀಗ ಕಠಿಣ ಕ್ರಮ ಕೈಗೊಳ್ಳುವ ಮೂಲಕ ರಾಜ್ಯ ಪೊಲೀಸ್ ಅಧಿಕ. ಹಲವಾರು ಜೈಲು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದ್ದು, ಕೆಲವರನ್ನು ವರ್ಗಾವಣೆ ಮಾಡಿ ಎಂದು ಸಿಎಂ ಜೋಸೆಫ್ ವಿಜಯ್ ಆದೇಶ ಹೊರಡಿಸಿದ್ದಾರೆ. ಎಎನ್ಐ ವರದಿ ಪ್ರಕಾರ, 2024ರ ಆಗಸ್ಟ್ನಿಂದ ಥೇಣಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರಾಗೃಹದ ಉಪ ಅಧೀಕ್ಷಕ ಎನ್.ರಾಮಲಿಂಗಂ ವಿರುದ್ಧ ಜೈಲಾಡಳಿತ ಮತ್ತು ಭದ್ರತಾ ಮೇಲ್ವಿಚಾರಣೆಯಲ್ಲಿ ವೈಫಲ್ಯಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ. ಒಟ್ಟು 17 ಸಿಬ್ಬಂದಿ ವಿರುದ್ಧ ಅಮಾನತು ಕ್ರಮ ಕೈಗೊಳ್ಳಲಾಗಿದ್ದು, ಅವರ ವಿರುದ್ಧ ಕಟ್ಟುನಿಟ್ಟಿನ ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಲಾಗಿದೆ.