ನವದೆಹಲಿ: ಇಬ್ಬರು ವಯಸ್ಕರ ನಡುವಿನ ಸಂಬಂಧ ಚೆನ್ನಾಗಿದ್ದ ಸಮಯದಲ್ಲಿ ಸಮ್ಮತಿಯ ದೈಹಿಕ ಅನ್ಯೋನ್ಯತೆಯಿದ್ದು, ಬಳಿಕ ಸಂಬಂಧ ಮುರಿಯಿತೆಂದ ಮಾತ್ರಕ್ಕೆ ಅದನ್ನು ಅತ್ಯಾಚಾರ ಎಂದು ಬ್ರಾಂಡ್ ಮಾಡಲು ಸಾಧ್. ವಿಫಲ ಪ್ರೇಮ ಸಂಬಂಧಗಳನ್ನು ಅತ್ಯಾಚಾರದ ಕ್ರಿಮಿನಲ್ ಪ್ರಕರಣಗಳಾಗಿ ಪರಿವರ್ತಿಸುವ ಪ್ರವೃತ್ತಿ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದೆ.ಸಂಬಂಧದ ವಿಷಯದಲ್ಲಿ ಪ್ರಾಸಿಕ್ಯೂಷನ್ ವಿರುದ್ಧದ ಅರ್ಜಿಯೊಂದನ್ನು ವಿಚಾರಣೆ ನಡೆಸಿರುವ ನ್ಯಾಯಮೂರ್ತಿಗಳಾದ ಬಿ.ವಿ. ಮಹಾದೇವನ್ ಅವರ ಪೀಠವು, ಇಬ್ಬರು ವಯಸ್ಕರ ನಡುವೆ ತಿಂಗಳುಗಳು ಅಥವಾ ವರ್ಷಗಳ ಕಾಲ ಮುಂದುವರಿದ ಸಮ್ಮತಿಯ ದೈಹಿಕ ಸಂಬಂಧವನ್ನು ವಿಘಟನೆಯ ನಂತರ ಅತ್ಯಾಚಾರದ ಬಣ್ಣ ಬಳಿಯಲಾಗುವುದಿಲ್ಲ ಎಂದು ಹೇಳಿತು.