ನಮಿತ್ ಮಲ್ಹೋತ್ರಾ ನಿರ್ಮಾಣದ ಬಿಗ್ ಬಜೆಟ್ 'ರಾಮಾಯಣ' ಸಿನಿಮಾದಲ್ಲಿ ನಟಿ ಸಾಯಿ ಪಲ್ಲವಿ ಯೋಧೆಯ ರೂಪದ ಸೀತೆಯಾಗಿ ಕಾಣಿಸಿಕೊಂಡಿದ್ದಾರೆ. ಖಡ್ಗವರಸೆ ಹಾಗೂ ಸಾಹಸ ದೃಶ್ಯಗಳಲ್ಲಿ ಮಿಂಚಿರುವ ಸಾಯಿ ಪಲ್ಲವಿ ಅವರ ಈ ಹೊಸ ಅವತಾರವು, ಭಾರತೀಯ ಪುರಾಣ ಮತ್ತು ಇತಿಹಾಸದಲ್ಲಿದ್ದ ಸೀತೆಯ ಶಕ್ತಿಶಾಲಿ ರೂಪವನ್ನು ಇಂದಿನ ಪೀಳಿಗೆಗೆ ಪರಿಚಯಿಸಲಿದೆ. ನಮಿತ್ ಮಲ್ಹೋತ್ರಾ ನಿರ್ಮಾಣದ ಬೃಹತ್ ಬಜೆಟ್ನ 'ರಾಮಾಯಣ' ಸಿನಿಮಾದಲ್ಲಿ ಸೀತೆಯ ಪಾತ್ರದ ಹೊಸ ಅವತಾರ ಹೊರಬಿದ್ದಿದೆ. ಈ ಸಿನಿಮಾದಲ್ಲಿ ನಟಿ ಸಾಯಿ ಪಲ್ಲವಿ ಕೇವಲ ಶಾಂತಸ್ವರೂಪಿ ಸೀತೆಯಾಗಿ ಅಲ್ಲದೆ, ಖಡ್ಗ ಹಿಡಿದು ಹೋರಾಡುವ ವಾರಿಯರ್ ಪ್ರಿನ್ಸೆಸ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಹೊಸ ಸಂಗತಿ ಈಗ ವಿಶ್ವಾದ್ಯಂತ ಭಾರಿ ಕುತೂಹಲಕ್ಕೆ ಕಾರಣವಾಗಿದೆ.