ಕೇಂದ್ರ ಸರ್ಕಾರವು 2027ರ ರಾಷ್ಟ್ರೀಯ ಜನಗಣತಿ ಪ್ರಕ್ರಿಯೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. 2027ರ ಜನವರಿ 25 ರಿಂದ ಫೆಬ್ರವರಿ 28 ರವರೆಗೆ ಮನೆ-ಮನೆ ಗಣತಿ ನಡೆಯಲಿದ್ದು, ಜನವರಿ 10 ರಿಂದ ಸ್ವಯಂ-ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಚುನಾವಣಾ ಮುಂಬರುವ ರಾಜ್ಯಗಳು ಹಾಗೂ ಹಿಮಪಾತ ಪ್ರದೇಶಗಳನ್ನು ಹೊರತುಪಡಿಸಿ ದೇಶಾದ್ಯಂತ ಡಿಜಿಟಲ್ ರೂಪದಲ್ಲಿ ಈ ಬೃಹತ್ ಸಮೀಕ್ಷೆ ನಡೆಯಲಿದೆ. ಬೆಂಗಳೂರು, ಅಕ್ಟೋಬರ್ 31: ದೇಶದ ಬಹುನಿರೀಕ್ಷಿತ 2027ರ ಜನಗಣತಿ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. ದೇಶಾದ್ಯಂತ 2027ರ ಜನವರಿ 25 ರಿಂದ ಫೆಬ್ರವರಿ 28 ರವರೆಗೆ ಮನೆ ಮನೆಗೆ ತೆರಳಿ ಜನಸಂಖ್ಯೆ ಗಣತಿ ಕಾರ್ಯವನ್ನು ನಡೆಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.