ಸಿನಿಮಾ ಕಳೆದೊಂದು ವರ್ಷಕ್ಕೂ ಹೆಚ್ಚು ಸಮಯದಿಂದ ಚಿತ್ರೀಕರಣದಲ್ಲಿದೆ. ಸಿನಿಮಾ ಇದೇ ಡಿಸೆಂಬರ್ಗೆ ರಿಲೀಸ್ ಆಗಲಿದೆ. ಸಿನಿಮಾದ ಬಿಡುಗಡೆ ದಿನಾಂಕವನ್ನು ಈಗಾಗಲೇ ಘೋಷಣೆ ಮಾಡಲಾಗಿದೆ. ಶಾರುಖ್ ಖಾನ್ ಸಿನಿಮಾಕ್ಕೆ ಭಾರತದ ಹಲವು ಭಾಷೆಯ ಸಿನಿಮಾಗಳು ದಾರಿ ಬಿಟ್ಟುಕೊಟ್ಟಿವೆ. ಆದರೆ ಹಾಲಿವುಡ್ ಸಿನಿಮಾಗಳು ಶಾರುಖ್ ಸಿನಿಮಾ ಅನ್ನು ಸುತ್ತವರೆದಿದ್ದು, ಸಂಕಷ್ಟಕ್ಕೆ ಎಡೆ ಮಡಿವೆ. ಶಾರುಖ್ ಖಾನ್ ನಟನೆಯ ‘ಕಿಂಗ್’ ಸಿನಿಮಾ ಇದೇ ವರ್ಷ ಬಿಡುಗಡೆ ಆಗಲಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡುತ್ತಿರುವ ಈ ಸಿನಿಮಾನಲ್ಲಿ ದೀಪಿಕಾ ಪಡುಕೋಣೆ ನಾಯಕಿ, ಶಾರುಖ್ ಖಾನ್ ಪುತ್ರಿಯೂ ಸಹ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಶಾರುಖ್ ಖಾನ್ ನಟನೆಯ ‘ಕಿಂಗ್’ ಸಿನಿಮಾ ಡಿಸೆಂಬರ್ 24 ಕ್ಕೆ ರಿಲೀಸ್ ಆಗುತ್ತಿದೆ.