ಓಹಾಯೊ ಸ್ಟೇಟ್ ಯೂನಿವರ್ಸಿಟಿಯಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ, ಥರ್ಬರ್ ಪತ್ರಿಕೋದ್ಯಮದತ್ತ ಆಕರ್ಷಿತರಾದರು. ‘ಕೊಲಂಬಸ್ ಡಿಸ್ಪ್ಯಾಚ್’ ಪತ್ರಿಕೆಯಲ್ಲಿ ವರದಿಗಾರರಾಗಿ ತಮ್ಮ ವೃತ್ತಿಜೀವನ ಆರಂಭಿಸಿದ ಅವರು, ನಂತರ ಪ್ಯಾರಿಸ್ ಮತ್ತು ನ್ಯೂಯಾರ್ಕ್ಗಳಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿದರು. 1927ರಲ್ಲಿ ಪ್ರಸಿದ್ಧ ಸಾಪ್ತಾಹಿಕವಾದ ‘ದಿ ನ್ಯೂಯಾರ್ಕರ್’ ಪತ್ರಿಕೆಯ ಸಂಪಾದಕೀಯ ಬಳಗವನ್ನು ಸೇರಿದ್ದು ಅವರ ಬದುಕಿನ ಮಹತ್ವದ ತಿರುವು. ಜೇಮ್ಸ್ ಗ್ಲೋವರ್ ಥರ್ಬರ್ ಅಮೆರಿಕನ್ ಹಾಸ್ಯ ಸಾಹಿತ್ಯ ಮತ್ತು ವ್ಯಂಗ್ಯಚಿತ್ರ ಲೋಕ ಕಂಡ ಅಪರೂಪದ ಪ್ರತಿಭೆ. ಇಪ್ಪತ್ತನೇ ಶತಮಾನದ ಶ್ರೇಷ್ಠ ಹಾಸ್ಯಬರಹಗಾರರಲ್ಲಿ ಒಬ್ಬರಾಗಿ ಗುರುತಿಸಿ ಕೊಂಡ ಥರ್ಬರ್, ದೈನಂದಿನ ಜೀವನದ ಸಣ್ಣಪುಟ್ಟ ವಿಚಿತ್ರಗಳು, ಕೌಟುಂಬಿಕ ತಲ್ಲಣಗಳು ಮತ್ತು ಮನುಷ್ಯನ ಅಸಹಾಯಕತೆಗಳನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಚಿತ್ರಿಸಿದರು.