ನಂದಿನಿ ಹಾಲಿನ ಬೆಲೆ ಏರಿಕೆಯ ಬೆನ್ನಲ್ಲೇ ಮೊಸರಿನ ದರವೂ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, 1 ಲೀಟರ್ ಮೊಸರಿನ ಬೆಲೆ ₹14 ಹಾಗೂ ಅರ್ಧ ಲೀಟರ್ ಪ್ಯಾಕೆಟ್ ಬೆಲೆ ₹6 ಏರಿಕೆಯಾಗಿದೆ. ಈಗಾಗಲೇ ನಂದಿನಿ ಹಾಲಿನ ದರ ಲೀಟರ್ಗೆ ₹8 ಏರಿಕೆಗೆ ನಿರ್ಧರಿಸಲಾಗಿದ್ದು, ನಂದಿನಿ ಹಾಲು ಮತ್ತು ಮೊಸರಿನ ಈ ಪರಿಷ್ಕೃತ ದರ ನಾಳೆಯಿಂದಲೇ ರಾಜ್ಯದಲ್ಲಿ ಜಾರಿಗೆ ಬರಲಿದೆ. ಬೆಂಗಳೂರು, ಅಕ್ಟೋಬರ್ 31: ಹಾಲಿನ ದರ ಏರಿಕೆ ಬೆನ್ನಲ್ಲೇ ಅದರ ಉತ್ಪನ್ನಗಳ ಬೆಲೆಯಲ್ಲೂ ಹೆಚ್ಚಳವಾಗ್ತಿದ್ದು, ಮೊಸರಿನ ಬೆಲೆಯಲ್ಲೂ ಗಣನೀಯ ಏರಿಕೆಯಾಗಿದೆ. ಲೀಟರ್ಗೆ ಮೊಸರಿನ ಬೆಲೆ ₹54 ರಿಂದ ₹68ಕ್ಕೆ ಹೆಚ್ಚಿದ್ದು, ಬರೋಬ್ಬರಿ 14 ರೂಪಾಯಿ ಏರಿಕೆ ಕಂಡಿದೆ.