ಬೆಂಗಳೂರು: ಪಟ್ಟಂದೂರು ಅಗ್ರಹಾರ ನಿವಾಸಿ ವಕೀಲ ಮಂಜುನಾಥ್ ಅವರನ್ನು ಬಿಹಾರಿ ಗ್ಯಾಂಗ್ ಗುಂಡಿಕ್ಕಿ ಹತ್ಯೆಗೈದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದುಷ್ಕರ್ಮಿಗಳ ಗುರುತು ಪತ್ತೆ ಮಾಡಿರು. ಕೊಲೆ ಆರೋಪಿಗಳಿಬ್ಬರು ಬಿಹಾರ ರಾಜ್ಯದವರು ಎಂಬುದು ಪತ್ತೆಯಾಗಿದೆ. ಕಳೆದ ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ಡೆಲಿವರಿ ಬಾಯ್ಗಳಾಗಿ ಕೆಲಸ ಮಾಡಿಕೊಂಡಿದ್ದರು. ಮಂಜುನಾಥ್ ಅವರನ್ನು ಶೂಟೌಟ್ ಮಾಡಿದ ಬಳಿಕ ಓರ್ವ ರೈಲಿನ ಮೂಲಕ ಚೆನ್ನೈಗೆ ತೆರಳಿದ್ದಾನೆ. ಮತ್ತೊಬ್ಬ ದ್ವಿಚಕ್ರ ವಾಹನದಲ್ಲಿ ಹೈದರಾಬಾದ್ಗೆ ತೆರಳಿದ್ದಾನೆ ಎಂದು ವೈಟ್ಫೀಲ್ಡ್ ವಿಭಾಗದ ಡಿಸಿಪಿ ಸೈದುಲ್ಲಾ ಅಡಾವತ್ ಅವರು ತಿಳಿಸಿದ್ದಾರೆ.ಆರೋಪಿಗಳ ಪತ್ತಗೆ ದೆಹಲಿ, ಕೋಲ್ಕತ್ತಾ, ಬಿಹಾರ, ಚೆನ್ನೈ ಮತ್ತು ಹೈದರಾಬಾದ್ ಸೇರಿ ಹಲವು ರಾಜ್ಯಗಳಲ್ಲಿ ಒಟ್ಟು ಎಂಟು ತಂಡ ತನಿಖೆ ಕೈಗೊಂಡಿವೆ.