ಚಿಕ್ಕಬಳ್ಳಾಪುರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವರ್ಚಸ್ಸನ್ನು ಹಾಳು ಮಾಡಿದವರು ಯಾರು? ಅವರ 50 ವರ್ಷದ ರಾಜಕಾರಣಕ್ಕೆ ಕಳಂಕ ತರಲು ಯತ್ನಿಸಿದವರನ್ನು ಮೊದಲು ಹಿಡಿಯಬೇಕು. ಇದನ್ನು ಬಿಟ್ಟು ಪ್ರ. ಇದನ್ನು ಬಿಟ್ಟು ಪ್ರಕರಣದಲ್ಲಿ ಬೇರೆಯವರನ್ನು ಬಲಿಪಶುಗಳನ್ನಾಗಿಸಲು ಹೊರಟಿರುವುದು ಸರಿಯಲ್ಲ ಎಂದು ಸಂಸದ ಡಾ ಕೆ.ಸುಧಾಕರ್ ಬೇಸರ ವ್ಯಕ್ತಪಡಿಸಿದ್ದಾರೆ.ಚಿಕ್ಕಬಳ್ಳಾಪುರದಲ್ಲಿನ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಗೃಹ ಸಚಿವ ಪ್ರಿಯಾಂಕ ಖರ್ಗೆ ಲ್ಯಾಜಿಕ್ ಇಲ್ಲದೇ ಮ್ಯಾಜಿಕ್ ಮಾಡುವ ವರ್ತನೆ ತೋರುತ್ತಿದ್ದಾರೆ. ಸ್ಟಿಂಗ್ ಆಪರೇಷನ್ ಮಾಡಿದವರನ್ನು ಬಿಟ್ಟು ಬೇರೆಯವರನ್ನು ಬಲಿಪಶು ಮಾಡುವುದು ಸರೀನಾ? ಪ್ರಶ್ನಿಸಿದ್ದಾರೆ.ಒಂದು ಸೂಕ್ಷ್ಮ ವಿಚಾರದಲ್ಲಿ ಸುಮ್ಮನೆ ರಾಜಕಾರಣ ಮಾಡಬೇಡಿ, ನಿಮ್ಮ ಆಡಳಿತ ಇನ್ನು ಒಂದು ವರ್ಷ ಮಾತ್ರ ಇರುತ್ತದೆ.