ವಿಶ್ವ ಕುಸ್ತಿ ಅಖಾಡದಲ್ಲಿ ಭಾರತದ ಕೀರ್ತಿಪತಾಕೆಯನ್ನು ಹಾರಿಸಿ, ಇಡೀ ದೇಶವೇ ಹೆಮ್ಮೆಪಡುವಂತೆ ಮಾಡಿರುವ ಮನಿಷಾ ಭಾನ್ವಾಲಾ ಕಜಕಸ್ತಾನ್ನ ಅಸ್ತಾನಾದಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್ಷಿಪ್ನ ಮಹಿಳೆಯರ 59 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ವಿಶ್ವ ಚಾಂಪಿಯನ್ಷಿಪ್ನಲ್ಲಿ 'ಸ್ವರ್ಣ ಪದಕ' ಮುಡಿಗೇರಿಸಿಕೊಂಡ ಭಾರತದ ಪ್ರಥಮ ಮಹಿಳಾ ಕುಸ್ತಿಪಟು ಎಂಬ ಅಭೂತಪೂರ್ವ ಇತಿಹಾಸವನ್ನು ಅವರು ಬರೆದಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಹಿಳಾ ಕುಸ್ತಿಯ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿರುವ ಮನಿಷಾ ಅವರ ಹಿನ್ನೆಲೆ, ಕ್ರೀಡಾ ಪಯಣ ಹಾಗೂ ಸಾಧನೆಯ ಹಿಂದಿನ ಕತೆ ಇಲ್ಲಿದೆ.