ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಖಟಕಭಾವಿ ಕ್ರಾಸ್ನಲ್ಲಿ ನಿರಾಣಿ ಸಕ್ಕರೆ ಕಾರ್ಖಾನೆಯ ಸಕ್ಕರೆ ಸಾಗಾಟ ಮಾಡುತ್ತಿದ್ದ ಲಾರಿಗಳನ್ನು ರೈತರು ತಡೆದಿದ್ದಾರೆ. MSP ನಿಗದಿಪಡಿಸದೆ ಸಕ್ಕರೆ ಮಾರಾಟ ಮಾಡುವ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತರು, ಐದು ಲಾರಿಗಳ ಟೈರ್ ಗಾಳಿ ತೆಗೆದು ಪ್ರತಿಭಟಿಸಿದರು. ಕನಿಷ್ಠ ಬೆಂಬಲ ಬೆಲೆ ಘೋಷಿಸಿದ ನಂತರವೇ ಸಕ್ಕರೆ ಮಾರಾಟ ಮಾಡುವಂತೆ ರೈತರು ತಾಕೀತು ಮಾಡಿದ್ದಾರೆ. ಬೆಳಗಾವಿ, ಅಕ್ಟೋಬರ್ 30: ನಿರಾಣಿ ಶುಗರ್ ಫ್ಯಾಕ್ಟರಿಯಿಂದ ಸಕ್ಕರೆ ಸಾಗಿಸುತ್ತಿದ್ದ 5 ಲಾರಿಗಳನ್ನ ರಸ್ತೆಯಲ್ಲೇ ರೈತರು ತಡೆದಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಖಟಕಭಾವಿ ಕ್ರಾಸ್ನಲ್ಲಿ ನಡೆದಿದೆ.