ಕೇದಾರನಾಥ ದೇವಾಲಯದ ಆವರಣ, ಭೈರವನಾಥ ಗುಡ್ಡ ಹಾಗೂ ಸುತ್ತಮುತ್ತಲಿನ ಪರ್ವತ ಶ್ರೇಣಿಗಳು ಪೂರ್ಣವಾಗಿ ಹಿಮದಿಂದ ಆವೃತಗೊಂಡಿದ್ದು, ಪ್ರಕೃತಿಯ ಈ ಸೌಂದರ್ಯವನ್ನು ಕಣ್ಣುಂಬಿಕೊಳ್ಳಲು ಭಕ್ತಾದಿಗಳು ಹಾಗೂ ಪ್ರವಾಸಿಗರು ಸಂಭ್ರಮಿಸುತ್ತಿದ್ದಾರೆ. ಹವಾಮಾನ ವೈಪರೀತ್ಯ ಹಾಗೂ ಉಷ್ಣಾಂಶ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಧಾಮಕ್ಕೆ ಆಗಮಿಸುವ ಯಾತ್ರಿಕರು ಕಡ್ಡಾಯವಾಗಿ ಬೆಚ್ಚಗಿನ ಉಡುಪುಗಳು ಮತ್ತು ಅತ್ಯಗತ್ಯ ವೈದ್ಯಕೀಯ ಸೌಲಭ್ಯಗಳೊಂದಿಗೆ ಬರಬೇಕು ಎಂದು ಸ್ಥಳೀಯ ಆಡಳಿತ ಹಾಗೂ ಪೊಲೀಸ್ ಇಲಾಖೆ ಮನವಿ ಮಾಡಿದೆ.