ಪ್ರತಿ ಸ್ಪರ್ಧಿಗಳು ಪ್ರತಿ ಬಾರಿಯೂ ಕ್ಯಾಪ್ಟನ್ ಆಗಲು ಬಹಳ ಕಷ್ಟಪಡುತ್ತಾರೆ. ಕ್ಯಾಪ್ಟನ್ ಆಗುವ ಅವಕಾಶ ತಪ್ಪಿದರೆ ಬಹಳ ಪರಿತಪಿಸುತ್ತಾರೆ. ಕೆಲವೊಮ್ಮೆ ಕ್ಯಾಪ್ಟನ್ ಆಗಲು ಅಡ್ಡದಾರಿಯನ್ನೂ ಸಹ ಹಿಡಿಯುವುದುಂಟು. ಈ ಬಾರಿ ಕ್ಯಾಪ್ಟೆನ್ಸಿ ಟಾಸ್ಕ್ನಲ್ಲಿ ಸಾಕಷ್ಟು ಟ್ವಿಸ್ಟು-ಟರ್ನುಗಳಿದ್ದವು. ಹಾಗಿದ್ದರೂ ಸಹ ಅದ್ಭುತವಾಗಿ ಆಟ ಆಡಿದ ಜಗ್ಗ ಮಮ್ಮಿ ಅವರು ಮೊದಲ ಬಾರಿಗೆ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗುವುದು ಸಾಧನೆಗೆ ಸಮ. ಕ್ಯಾಪ್ಟೆನ್ಸಿ ಓಟಕ್ಕೆ ಯಶಸ್, ಸೋನಿಕಾ, ಗಾನವಿ, ಕುಮಾರಿ, ಜಗ್ಗಮಮ್ಮಿ, ತಾಂಡವ್ ಅವರುಗಳು ಆಯ್ಕೆ ಆಗಿದ್ದಾರೆ. ಚೌಕಾಕಾರದ ಆಕೃತಿಯನ್ನು ರಚಿಸಿ ಅದರ ನಡುವಿನಿಂದ ಚೆಂಡನ್ನು ನಿಗದಿತ ಗುರಿಗೆ ಎಸೆಯುವ ಟಾಸ್ಕ್ ಅನ್ನು ನೀಡಲಾಗಿತ್ತು.