ನವೆಂಬರ್ 1ರಿಂದ ಅಡುಗೆ ಮತ್ತು ವಾಣಿಜ್ಯ ಎಲ್ಪಿಜಿ ಸಿಲಿಂಡರ್ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳಾಗಲಿವೆ. ಸಬ್ಸಿಡಿ ದರದಲ್ಲಿ ಎಲ್ಪಿಜಿ ಪಡೆಯಲು ಇ-ಕೆವೈಸಿ ಕಡ್ಡಾಯವೆಂಬ ನಿಯಮ ನವೆಂಬರ್ನಿಂದ ಕಟ್ಟುನಿಟ್ಟಾಗಿ ಜಾರಿಯಾಗಲಿದೆ. ಆಧಾರ್ ಇ-ಕೆವೈಸಿ ಕಡ್ಡಾಯ ಹಾಗೂ ಬೆಲೆ ಪರಿಷ್ಕರಣೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ. ನವದೆಹಲಿ, ಅಕ್ಟೋಬರ್ 26: ನವೆಂಬರ್ 1ರಿಂದ ಮನೆ ಮತ್ತು ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ (LPG) ನಿಯಮಗಳು ಹಾಗೂ ಬೆಲೆಯಲ್ಲಿ ಬದಲಾವಣೆಗಳು ಜಾರಿಗೆ ಬರಲಿವೆ. ಪ್ರತೀ ತಿಂಗಳು ತೈಲ ಮಾರುಕಟ್ಟೆ ಸಂಸ್ಥೆಗಳಾದ ಇಂಡೇನ್, ಹೆಚ್ಪಿ ಗ್ಯಾಸ್ ಮತ್ತು ಭಾರತ್ ಗ್ಯಾಸ್ ಪ್ರತೀ ತಿಂಗಳು ಮೊದಲ ದಿನ ಎಲ್ಪಿಜಿ ದರ ಪರಿಷ್ಕರಣೆ ಮಾಡುವುದು ಮುಂದುವರಿಯುತ್ತವೆ.