ಪಿ.ಎಸ್. ಮಿತ್ರನ್ ನಿರ್ದೇಶನದಲ್ಲಿ ಕಾರ್ತಿ ನಾಯಕರಾಗಿ ನಟಿಸಿರುವ 'ಸರ್ದಾರ್ 2' ಸಿನಿಮಾ ಈಗ ಒಟಿಟಿಯಲ್ಲಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಈ ಸ್ಪೈ ಥ್ರಿಲ್ಲರ್ ಚಿತ್ರದಲ್ಲಿ ಮಾಳವಿಕಾ ಮೋಹನನ್, ಆಶಿಕಾ ರಂಗನಾಥ್ ಮತ್ತು ಎಸ್.ಜೆ. ಸೂರ್ಯ ಪ್ರಮುಖ ಪಾತ್ರಗಳಲ್ಲಿದ್ದಾರೆ. ಥಿಯೇಟರ್ನಲ್ಲಿ ರಿಲೀಸ್ ಆದಾಗ ಚಿತ್ರಕ್ಕೆ ಹೇಳಿಕೊಳ್ಳುವಂತಹ ರೆಸ್ಪಾನ್ಸ್ ಸಿಕ್ಕಿರಲಿಲ್ಲ. ಆದರೆ, ಈಗ ಒಟಿಟಿಯಲ್ಲಿ ಚಿತ್ರದ ಕಥೆ ಬದಲಾದಂತೆ ಕಾಣುತ್ತಿದೆ. ಅಮೆಜಾನ್ ಪ್ರೈಮ್ನಲ್ಲಿ ನಂಬರ್ 1 ಅಮೆಜಾನ್ ಪ್ರೈಮ್ ವಿಡಿಯೋ ಇಂಡಿಯಾ ಟ್ರೆಂಡಿಂಗ್ ಲಿಸ್ಟ್ನಲ್ಲಿ 'ಸರ್ದಾರ್ 2' ಮೊದಲ ಸ್ಥಾನಕ್ಕೇರಿದೆ. ಒಟಿಟಿಯಲ್ಲಿ ಸಿಗುತ್ತಿರುವ ಈ ಭರ್ಜರಿ ರೆಸ್ಪಾನ್ಸ್ನಿಂದಾಗಿ ಸಿನಿಮಾ ಮತ್ತೆ ಚರ್ಚೆಯಲ್ಲಿದೆ.