ಟೆಲ್ ಅವೀವ್: ಅ. 27ರಂದು ನಡೆದ ಇಸ್ರೇಲ್ ಸಂಸತ್ ಚುನಾವಣೆಯ ಮತ ಎಣಿಕೆ ಮುಕ್ತಾಯಗೊಂಡಿದ್ದು, 120 ಸದಸ್ಯರ ಬಲದ 'ನೆಸೆಟ್' (ಇಸ್ರೇಲ್ ಸಂಸತ್ತು)ನಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಪಕ್ಷ. ಮತ್ತು ಅರಬ್ ಪಕ್ಷಗಳು 19 ಸ್ಥಾನ ಪಡೆದು ಕಿಂಗ್ ಮೇಕರ್ಗಳಾಗಿವೆ ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ.ಸರ್ಕಾರ ರಚಿಸಲು ಸಂಸತ್ನಲ್ಲಿ ಬಹುಮತಕ್ಕೆ ಅಗತ್ಯವಿರುವ 61 ಸ್ಥಾನಗಳನ್ನು ಯಾವುದೇ ರಾಜಕೀಯ ಪಕ್ಷ ಪಡೆದಿಲ್ಲ. ನೆತನ್ಯಾಹು ಅವರ ಬಣವು 53 ಸ್ಥಾನಗಳಲ್ಲಿ ಗೆದ್ದರೆ, ವಿರೋಧ ಪಕ್ಷವು 48 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಯಾವುದೇ ಪಕ್ಷ ಅಧಿಕಾರ ರಚಿಸಬೇಕಾದ್ರೂ ಅರಬ್ ಪಕ್ಷ ಬೆಂಬಲ ಪಡೆಯಬೇಕಾಗಿದೆ.