ಉತ್ತರ ಪ್ರದೇಶ: ಈ ತಿಂಗಳ 24ರಂದು ಲಖನೌದಲ್ಲಿ ಒಂದೇ ಕುಟುಂಬದ ಮೂವರು ಪುರುಷರನ್ನು ಗುಂಡಿಕ್ಕಿ ಹತ್ಯೆಗೈದ ಘಟನೆಗೆ ಸಂಬಂಧಿಸಿದ ಎರಡು ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿ. ಸಾದತ್ಗಂಜ್ ಪ್ರದೇಶದಲ್ಲಿ ನಡೆದ ಈ ಘಟನೆಯಲ್ಲಿ ಶಂಭು, ಶಿವ ತಿವಾರಿ ಮತ್ತು ಅವರ ಪುತ್ರ ಸುಯಶ್ ಎಂಬುವವರು ಆರೋಪಿ ರಿಷಭ್ ಶುಕ್ಲಾ ನಡೆಸಿದ ಗುಂಡಿನ ದಾಳಿಯಲ್ಲಿ ಮೃತಪಟ್ಟ ದುರ್ದೈವಿಗಳು ಎಂದು ವರದಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ ಆರೋಪಿ ಪಿಸ್ತೂಲ್ ಹಿಡಿದು ಗುಂಡು ಹಾರಿಸುತ್ತಿರುವುದು ಮತ್ತು ತಾನು ಆತ್ಮರಕ್ಷಣೆಗಾಗಿ ಈ ಕೃತ್ಯ ಎಸಗಿದ್ದಾಗಿ ಪದೇ ಪದೇ ಹೇಳುತ್ತಿರುವುದು ಕಂಡುಬಂದಿದೆ.