ವಿಜಯವಾಡ: ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ತೆಂಗು ಬೆಳೆಗಾರರಿಗೆ ‘ಅರ್ನಬ್’ ಚಂಡಮಾರುತ ( Cyclone Arnab Damage ) ಅಪಾರ ಪ್ರಮಾಣದ ಹಾನಿ ಉಂಟುಮಾಡಿದ್ದು, ಚೇತರಿಸಿಕೊಳ್ಳಲಾಗದಷ್ಟು. ಭೀಕರ ಬಿರುಗಾಳಿಯ ಆರ್ಭಟಕ್ಕೆ ವರ್ಷಗಟ್ಟಲೆ ಜತನದಿಂದ ಪೋಷಿಸಿ ಬೆಳೆಸಿದ್ದ ನೂರಾರು ತೆಂಗಿನ ಮರಗಳು ಧರೆಗುರುಳಿವೆ. ಇನ್ನೂ ಕೆಲವು ಮರಗಳ ತೊಂಡೆಗಳು (ಮೇಲ್ಭಾಗ) ಮುರಿದುಬಿದ್ದು ತೆಂಗಿನ ತೋಟಗಳು ಸಂಪೂರ್ಣವಾಗಿ ನಾಶವಾಗಿವೆ. ಕಣ್ಣೆದುರೇ ತಮ್ಮ ಜೀವನದ ಆಧಾರವಾಗಿದ್ದ ಮರಗಳು ಧರೆಗುರುಳಿರುವುದನ್ನು ಕಂಡು ರೈತರು ಕಣ್ಣೀರು ಹಾಕುತ್ತಿದ್ದಾರೆ. ಮೊಗಲ್ತೂರು ಮತ್ತು ನರಸಾಪುರ ಪ್ರದೇಶಗಳಲ್ಲಿ ತೆಂಗಿನ ತೋಟಗಳ ಸ್ಥಿತಿ ತೀರಾ ಶೋಚನೀಯವಾಗಿದೆ..ಪ್ರಿಯಕರನೊಂದಿಗೆ ಪುತ್ರಿ ಎಸ್ಕೇಪ್: ಅದೇ ನೋವಲ್ಲಿ ತಾಯಿ ಸಾವು, ಬದುಕಿರುವಾಗಲೇ ಮಗಳಿಗೇ ಪಿಂಡಪ್ರದಾನ ಮಾಡಿದ ತಂದೆ!