ಗಾಂಧಿನಗರ: ಇರಾನ್ನಲ್ಲಿ ನಡೆಯುತ್ತಿರುವ ಯುದ್ಧ ಹಾಗೂ ಗಲ್ಫ್ ರಾಷ್ಟ್ರಗಳ ಉದ್ವಿಗ್ನತೆಯ ಈ ಕಷ್ಟದ ಸಮಯದಲ್ಲಿ ವಿಪಕ್ಷಗಳು ದೇಶದಲ್ಲಿ ಸುಳ್ಳು ವದಂತಿಗಳನ್ನು ಹಬ್ಬಿಸುವ ಮೂಲಕ ಜನರಲ್ಲಿ ಅನಗತ್ಯ ಆತ. ಆದರೆ, ದೇಶದ ಈ ಅಖಂಡ ಪ್ರಗತಿಯನ್ನು ಸಹಿಸದ ಕೆಲವು ರಾಜಕೀಯ ಗುಂಪುಗಳು ದೇಶವನ್ನು ನಿರಂತರವಾಗಿ ಸಂಕಷ್ಟದಲ್ಲಿ ನೋಡಲು ಬಯಸುತ್ತಿವೆ. ಗಲ್ಫ್ ರಾಷ್ಟ್ರಗಳ ಬಿಕ್ಕಟ್ಟಿನಿಂದ ಉದ್ಭವಿಸಿರುವ ಅನಿಶ್ಚಿತತೆಯನ್ನು ದುರ್ಬಳಕೆ ಮಾಡಿಕೊಂಡು, ದೇಶದಲ್ಲಿ ಅಡುಗೆ ಗ್ಯಾಸ್ ಮತ್ತು ರಸಗೊಬ್ಬರಗಳ ತೀವ್ರ ಕೊರತೆಯಿದೆ ಎಂದು ವಿಪಕ್ಷಗಳು ಉದ್ದೇಶಪೂರ್ವಕವಾಗಿ ಸುಳ್ಳು ವದಂತಿಗಳನ್ನು ಬಿತ್ತುತ್ತಿವೆ. ಕೇವಲ ಮೋದಿಯನ್ನು ದ್ವೇಷಿಸಲು ಮತ್ತು ರಾಜಕೀಯವಾಗಿ ತೇಜೋವಧೆ ಮಾಡಲು ವಿಪಕ್ಷಗಳು ಇಂತಹ ಕೃತ್ಯಗಳಲ್ಲಿ ನಿರಂತರವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿವೆ ಎಂದು ಪ್ರಧಾನಿ ಆಕ್ರೋಶ ವ್ಯಕ್ತಪಡಿಸಿದರು..