ನವದೆಹಲಿ: ಐಡಿಬಿಐ ಬ್ಯಾಂಕ್ನ ಬಹುಪಾಲು ಷೇರು ಮಾರಾಟಕ್ಕೆ ಸಂಬಂಧಿಸಿ ಸಲ್ಲಿಕೆಯಾದ ಪರಿಷ್ಕೃತ ಹಣಕಾಸು ಬಿಡ್ಗಳ ಕುರಿತು ಪರಿಶೀಲನೆ ನಡೆದಿದೆ ಮತ್ತು ಈ ಪ್ರಕ್ರಿಯೆ ಸ್ಥಿರ ವೇಗದಲ್ಲಿ ಸಾಗುತ್ತಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ಸ್ಪಷ್ಟಪಡಿಸಿವೆ. ಜುಲೈ ತಿಂಗಳಲ್ಲಿ ಹೂಡಿಕೆದಾರ ಪ್ರೇಮ್ ವಿಸ್ತಾ ಬೆಂಬಲಿತ ಫೈರ್ಫ್ಯಾಕ್ಸ್ ಫೈನಾನ್ಶಿಯಲ್ ಹೋಲ್ಡಿಂಗ್ಸ್ ಮತ್ತು ದುಬೈ ಮೂಲದ ಎಮಿರೇಟ್ಸ್ ಎನ್ಬಿಡಿ ಸಂಸ್ಥೆಯು ಐಡಿಬಿಐನ ಶೇ.60.72ರಷ್ಟು ಷೇರು ಖರೀದಿಗಾಗಿ ಪರಿಷ್ಕೃತ ಬಿಡ್ ಸಲ್ಲಿಸಿತ್ತು. ಇಬ್ಬರೂ ಬಿಡ್ಡರ್ಗಳಿಗೆ ಭಾರತೀಯ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನುಭವ ಇದೆ. ದುಬೈ ಮೂಲದ ಎಮಿರೇಟ್ಸ್ ಎನ್ಡಿಬಿ ಈಗಾಗಲೇ ಆರ್ಬಿಎಲ್ ಬ್ಯಾಂಕ್ನಲ್ಲಿ ಈ ವರ್ಷದ ಆರಂಭದಲ್ಲಿ ಶೇ.