ನ್ಯೂಜಿಲೆಂಡ್ ವಿರುದ್ಧದ 4ನೇ ಟಿ20 ಪಂದ್ಯಕ್ಕೆ ಆಕ್ಲೆಂಡ್ ಸಜ್ಜು. ಸರಣಿ 3-0 ಅಂತರದಲ್ಲಿ ಗೆದ್ದಿರುವ ಭಾರತ ಕ್ಲೀನ್ ಸ್ವೀಪ್ ಗುರಿ ಹೊಂದಿದೆ. ಟಾಸ್ ಗೆದ್ದ ನಾಯಕ ಅಯ್ಯರ್ ಬೌಲಿಂಗ್ ಆಯ್ದರು. ಇಶಾನ್ ಕಿಶನ್ ಹಾಗೂ ಮಯಾಂಕ್ ಯಾದವ್ ತಂಡ ಸೇರಿದ್ದು, ವೈಭವ್ ಸೂರ್ಯವಂಶಿ ಮತ್ತು ಭುವನೇಶ್ವರ್ ಕುಮಾರ್ಗೆ ವಿಶ್ರಾಂತಿ ನೀಡಲಾಗಿದೆ. ಭಾರತ ಗೆಲುವಿನ ಓಟ ಮುಂದುವರಿಸಲು ಸಿದ್ಧವಾಗಿದೆ. ನ್ಯೂಜಿಲೆಂಡ್ ಮತ್ತು ಭಾರತ ನಡುವಿನ ನಾಲ್ಕನೇ ಟಿ20 ಪಂದ್ಯಕ್ಕೆ ಆಕ್ಲೆಂಡ್ನ ಈಡನ್ ಪಾರ್ಕ್ ಮೈದಾನ ಸಜ್ಜಾಗಿದೆ. ಈಗಾಗಲೇ ಮೊದಲ ಮೂರು ಪಂದ್ಯಗಳನ್ನು ಗೆದ್ದಿರುವ ಭಾರತ ತಂಡ ಸರಣಿಯನ್ನು 3-0 ಅಂತರದಲ್ಲಿ ತನ್ನದಾಗಿಸಿಕೊಂಡಿದೆ. ಇದೀಗ ಕ್ಲೀನ್ ಸ್ವೀಪ್ ಮಾಡುವ ಗುರಿಯೊಂದಿಗೆ ಟೀಂ ಇಂಡಿಯಾ ಕಣಕ್ಕಿಳಿಯಲಿದೆ.