ಪ್ರಧಾನಿ ಮೋದಿ ಗುಜರಾತ್ಗೆ ಭೇಟಿ ನೀಡಿ 'ಕೃಷಿ ನಮ್ಮ ಸಂಸ್ಕೃತಿ' ಎಂದರು. 14,000 ಕೋಟಿ ರೂ. ಯೋಜನೆಗಳಿಗೆ ಚಾಲನೆ ನೀಡಿದರು. ರೈತರಿಗೆ ಪಿಎಂ ಕಿಸಾನ್ ನೆರವು, ರಸಗೊಬ್ಬರ ಸಬ್ಸಿಡಿ ಘೋಷಿಸಿದರು. ಹೈನುಗಾರಿಕೆ ಸುಧಾರಣೆಗೆ ಒತ್ತು, ಕಂಕರೆಜ್ ಗೋ ತಳಿ ಸಂಶೋಧನಾ ಕೇಂದ್ರ ಹಾಗೂ ಬಯೋ-ಸಿಎನ್ಜಿ ಘಟಕಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಕೃಷಿ ಮೂಲಸೌಕರ್ಯ, ರಸ್ತೆ, ಮೆಟ್ರೋ ಯೋಜನೆಗಳೂ ಸೇರಿವೆ. ಅಹಮದಾಬಾದ್, ಅಕ್ಟೋಬರ್ 30: ಅಗ್ರಿಕಲ್ಚರ್ ಈಸ್ ಅವರ್ ಕಲ್ಚರ್ ಅಂದರೆ, ಕೃಷಿ ನಮ್ಮ ಸಂಸ್ಕೃತಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗುಜರಾತ್ನ ಬನಸ್ಕಾಂಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೃಷಿ ಮತ್ತು ರೈತರ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ತಿಳಿಸಿದರು.