ಕಾನ್ಸ್ಟೇಬಲ್ಪರೀಕ್ಷೆಯಲ್ಲಿ 25 ಪಡೆದು ವಿಎ ಪರೀಕ್ಷೆಯಲ್ಲಿ 151 ಅಂಕಗಳೊಂದಿಗೆ ಟಾಪರ್ ಆಗಿರುವ ಕುರಿತ ಸಂಶಯಗಳಿಗೆ ಹಾವೇರಿಯ ಶಂಕರ ಬನ್ನೂರು ಸ್ಪಷ್ಟನೆ ನೀಡಿದ್ದು, ಯಾವುದೇ ತನಿಖೆಗೂ ಸಿದ್ಧ ಎಂದಿದ್ದಾರೆ. ಕಾನ್ಸ್ಟೇಬಲ್ ಪರೀಕ್ಷೆಯ ಸಂದರ್ಭ ತನ್ನ ಸಹೋದರಿನಿಗೆ ಅಪಘಾತವಾಗಿತ್ತು. ತನಗೂ ಏಟಾಗಿದ್ದ ಕಾರಣ ಸರಿಯಾಗಿ ಪರೀಕ್ಷೆ ಬರೆಯಲು ಆಗಿರಲಿಲ್ಲ ಎಂದವರು ತಿಳಿಸಿದ್ದಾರೆ. ಹಾವೇರಿ, ಅಕ್ಟೋಬರ್ 30: ಕಾನ್ಸ್ಟೇಬಲ್ ಪರೀಕ್ಷೆಯಲ್ಲಿ 25 ಅಂಕ ಪಡೆದಿದ್ದಾತ ಗ್ರಾಮ ಲೆಕ್ಕಾಧಿಕಾರಿ ಎಕ್ಸಾಂನಲ್ಲಿ 151 ಮಾರ್ಕ್ಸ್ ಪಡೆದು ರಾಜ್ಯಕ್ಕೆ ಟಾಪರ್ ಆಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ತನಿಖೆಗೆ ಆಗ್ರಹ ಸೋಶಿಯಲ್ ಮೀಡಿಯಾದಲ್ಲಿ ಕೇಳಿಬಂದಿತ್ತು. ಬಳಿಕ ಈ ಸಂಬಂಧ ತನಿಖೆಗೆ ಕೆಇಎ ಕೂಡ ಆದೇಶಿಸಿತ್ತು.