ಬೆಂಗಳೂರಿನ ಎಚ್ಎಸ್ಆರ್ ವಿಭಾಗದಲ್ಲಿ ನಿಯಮಬಾಹಿರ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡಿದ ಆರೋಪ ಕೇಳಿಬಂದಿದೆ. ಎಸ್10, ಎಸ್11, ಎಸ್12, ಎಸ್13, ಎಸ್19 ಮತ್ತು ಎಸ್20 ಉಪವಿಭಾಗಗಳ ದಾಖಲೆಗಳು ಬೆಸ್ಕಾಂ ಅಧಿಕಾರಿಗಳ ಪರಿಶೀಲನಾ ಕ್ರಮದ ಬಗ್ಗೆ ಪ್ರಶ್ನೆ ಹುಟ್ಟಿಸಿವೆ. ಬೆಂಗಳೂರು | ರಾಜ್ಯ | ಟಾಪ್ ನ್ಯೂಸ್. ಬೆಂಗಳೂರಿನ ದಕ್ಷಿಣ ಎಚ್ಎಸ್ಆರ್ ವಿಭಾಗದಲ್ಲಿ ನಿಯಮಬಾಹಿರ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ನ್ಯೂಸ್ಫಸ್ಟ್ಗೆ ಲಭ್ಯವಾಗಿರುವ ದಾಖಲೆಗಳಲ್ಲಿ ಹಲವು ವಿದ್ಯುತ್ ಸಂಪರ್ಕಗಳ ವಿವರಗಳಿದ್ದು, ಕಟ್ಟಡಗಳ ಅನುಮತಿ ಮತ್ತು ವಿದ್ಯುತ್ ಸಂಪರ್ಕ ಮಂಜೂರಾತಿ ನಡುವಿನ ಸಂಬಂಧದ ಬಗ್ಗೆ ಪ್ರಶ್ನೆಗಳು ಎದ್ದಿವೆ.